    ಮೂಲದೊಡನೆ ಪರಿಶೀಲಿಸಿ
ಅನಿರ್ದಿಷ್ಟರಚನೆ

ಸಮತೋಲ ಸಮೀಕರಣಗಳಿಂದಲೇ (ಈಕ್ವೇಷನ್ಸ್ ಆಫ್ ಈಕ್ವಿಲಿಬ್ರಿಯಂ) ಉತ್ತರಗಳನ್ನು ಪಡೆಯಲು ಅಸಾಧ್ಯವಾದಾಗ ಒಂದು ರಚನೆ ಅನಿರ್ದಿಷ್ಟ (ಇಂಡೆಫನೆಟ್) ಎಂದು ಅನ್ನಿಸಿಕೊಳ್ಳುತ್ತದೆ; ಎಂದರೆ =0, =0 ಮತ್ತು =0 ಎಂಬ ಮೂರು ಸ್ಥಿತಿ (ಸ್ಟ್ಯಾಟಿಕ್) ಸಮತೋಲದ ಮೂಲನಿಯಮಗಳಿಂದಲೇ ರಚನಾವಿನ್ಯಾಸದ ಎಲ್ಲ ಪ್ರತಿಕ್ರಿಯಾ ಘಟಕಗಳನ್ನೂ ಅಂತಸ್ಥ ಒತ್ತಡಗಳನ್ನೂ (ಇಂಟರ್ನಲ್ ಸ್ಟ್ರೆಸಸ್) ಕಂಡು ಹಿಡಿಯಲು ಅಸಾಧ್ಯ. ಒಂದು ದತ್ತ ರಚನೆಯಲ್ಲಿರುವ ಅe್ಞÁತಗಳ ಸಂಖ್ಯೆ ಮತ್ತು ಆ ರಚನೆಯ ಸಮತೋಲ ಸ್ಥಿತಿಯನ್ನು ನಿರ್ಧರಿಸುವ ಸಮೀಕರಣಗಳ ಸಂಖ್ಯೆ ಇವೆರಡರ ವ್ಯತ್ಯಾಸವನ್ನು ತಿಳಿಸುವ ಸಂಖ್ಯೆಯೇ ಅದರ ಅನಿರ್ದಿಷ್ಟತೆಯ ಪ್ರಮಾಣ. 

ವಿಲೋಮವಾಗಿ ಸ್ಥಿತಿಸಮತೋಲನ ಮೂರು ನಿಯಮಗಳಿಂದಲೇ ಎಲ್ಲ ಪ್ರತಿಕ್ರಿಯಾ ಘಟಕಗಳನ್ನು ರಚನೆಯ ಅಂಗಭಾಗಗಳಲ್ಲಿನ ಎಲ್ಲ ಬಲವನ್ನೂ ಹಾಗೂ ಮಹತ್ತ್ವವನ್ನೂ (ಬೆಂಡಿಂಗ್ ಮೊಮೆಂಟ್) ಕಂಡುಹಿಡಿಯಲು ಸಾಧ್ಯವಾದಲ್ಲಿ ಆ ರಚನೆ ನಿರ್ದಿಷ್ಟರಚನೆ ಎಂದೆನಿಸುತ್ತದೆ.

ಸಮತೋಲ ಸಮೀಕರಣಗಳಿಂದ ಪ್ರತಿಕ್ರಿಯೆಗಳನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದಲ್ಲಿ ಆ ರಚನೆ ಬಾಹ್ಯ ಅನಿರ್ದಿಷ್ಟವೆಂದೆನಿಸುತ್ತದೆ (ಎಕ್ಸ್‍ಟರ್ನಲ್ ಇಂಡೆಫನೆಟ್). ಪ್ರತಿಕ್ರಿಯೆಗಳು ತಿಳಿದಿದ್ದು. ಎಲ್ಲ ಅಥವಾ ಯಾವುದಾದರೂ ಅಂಗಭಾಗದಲ್ಲಿನ ಒತ್ತಡಗಳನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದಲ್ಲಿ ಆ ರಚನೆ ಒಳಗಣ ಅನಿರ್ದಿಷ್ಟವೆಂದೆನಿಸುತ್ತದೆ (ಇಂಟರ್ನಲ್ ಇಂಡೆಫನೆಟ್). ರಚನೆಯೊಳಗಿನ ಮಾರ್ಪಾಟುಹೊಂದಿದ ರೂಪದ ಪರಿಗಣನೆಯಿಂದ ಒಳಗಣ ಅಥವಾ ಹೊರಗಣ ಅನಿರ್ದಿಷ್ಟ ಬಲಗಳನ್ನು ಕಂಡುಹಿಡಿಯಬಹುದು.
ದೃಢರಚನೆಗಳು (ರಿಜಿಡ್ ಫ್ರೇಮ್ಸ್) ಅಥವಾ ತುದಿಯಿಂದ ತುದಿಯವರೆಗೆ ಬದಲಿಸಿದ ದೂರವಿರುವ ತುದಿಗಳು, ನಿರ್ಬಂಧಿಸಿರುವ ಕಮಾನುಗಳು (ರಿಸ್ಟ್ರೆನ್ಡ್) ಮತ್ತು ಎರಡು ಅಥವಾ ಹೆಚ್ಚು ಆಧಾರಗಳನ್ನು ಹೊಂದಿದ್ದು, ಸುತ್ತುವಿಕೆಯನ್ನು ತಡೆಗಟ್ಟಲು ತುದಿಗಳನ್ನು ನೆಲೆಗೊಳಿಸಿರುವ ತೊಲೆ ಅಥವಾ ರಚನೆಗಳು- ಇವೇ ಹೊರಗಿನ ಸ್ಥಿರ ಅನಿರ್ದಿಷ್ಟತೆಯ ಸಾಮಾನ್ಯ ಉದಾಹರಣೆಗಳಾಗಿವೆ. ಸ್ಥಿರವಾಗಿ ಹೊರೆಯನ್ನು ಹೊರಬಲ್ಲ ಎರಡು ಅಥವಾ ಹೆಚ್ಚು ಸ್ವತಂತ್ರ ಅಂಗಗಳು ಅಥವಾ ಅಂಗಗಳ ವ್ಯವಸ್ಥೆಗಳನ್ನು ಹೊಂದಿರುವ ರಚನೆ ಒಳಗಿನ ಸ್ಥಿರ ಅನಿರ್ದಿಷ್ಟರಚನೆ (ಇಂಟರ್ನಲಿ ಸ್ಟ್ಯಾಟಿಕಲಿ ಇಂಡೆಫನೆಟ್ ಸ್ಟ್ರಕ್ಚರ್) ಎಂದು ಅನ್ನಿಸಿಕೊಳ್ಳುತ್ತದೆ. b = 2ಎ -  ಎಂಬ ಸಮೀಕರಣದ ಸಹಾಯದಿಂದ ರಚನೆಯ ಅನಿರ್ದಿಷ್ಟತೆಯನ್ನು ಪರೀಕ್ಷಿಸಬಹುದು. ಈ ಸಮೀಕರಣದಲ್ಲಿ b ಎಂಬುದು ತೊಲೆಗಳ ಸಂಖ್ಯೆ, ಎ ಎಂಬುದು ಕೂಡೆಗಳ ಸಂಖ್ಯೆ (ಜಾಯಿಂಟ್ಸ್),  ಎಂಬುದು ಪ್ರತಿಕ್ರಿಯಾ ಘಟಕಗಳ ಸಂಖ್ಯೆ. b>2ಎ -  ಆಗಿದ್ದಲ್ಲಿ ಆ ರಚನೆ ಒಳಸ್ಥಿರ ಅನಿರ್ದಿಷ್ಟವಾಗುತ್ತದೆ.

(ಎಸ್.ಟಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ